ಟೆಂಪ್ಲೇಟು: Beilsteinಟೆಂಪ್ಲೇಟು: ಎಥಿಲೀನ್ ಡೈಬ್ರೋಮೈಡ್ ಒಂದು ಸಾವಯವ ಸಂಯುಕ್ತ. ಇದರ ರಚನಾ ಸೂತ್ರ BrCH2-CH2Br. ಇದಕ್ಕೆ ಎಥಿಲೀನ್ ಬ್ರೋಮೈಡ್ ಎಂಬ ಹೆಸರೂ ಇದೆ. == ತಯಾರಿಕೆ == ಎಥಿಲೀನ್ ಮತ್ತು ಬ್ರೋಮೀನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ. ಎಥಿಲಿನ್ ಅನಿಲವನ್ನೂ ಬ್ರೋಮಿನ್ ಆವಿಯನ್ನೂ ಬೆರೆಸಿ ಸೂಕ್ತವಾದ ವೇಗವರ್ಧಕಗಳ (ಕ್ಯಾಟಲಿಸ್ಟ್ಸ್) ಮೇಲೆ ಹಾಯಿಸಿ ಇದನ್ನು ತಯಾರಿಸುತ್ತಾರೆ. C2H4 + Br2 → C2H4Br2 ಸೂಕ್ತ ದ್ರಾವಕವನ್ನು ಉಪಯೋಗಿಸಿ ದ್ರಾವಣದಲ್ಲಿಯೂ ಈ ಕ್ರಿಯೆ ನಡೆಯಬಹುದು. == ಗುಣಗಳು == ಎಥಿಲೀನ್ ಡೈಬ್ರೋಮೈಡ್ ಬಣ್ಣವಿಲ್ಲದ ದ್ರವ. ಇದರ ಕುದಿಬಿಂದು ೧೩೨೦ ಸೆಂ. ಗ್ರೇ. == ಉಪಯೋಗಗಳು == ಔದ್ಯೋಗಿಕ ಕ್ಷೇತ್ರಗಳಲ್ಲಿ ಇದಕ್ಕೆ ಅನೇಕ ಉಪಯೋಗಗಳಿವೆ. ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸಲು ಪೆಟ್ರೋಲಿಗೆ ಬೆರೆಸುವ ಈಥೈಲ್ ಫ್ಲ್ಯೂಯಿಡ್‍ನಲ್ಲಿ ೨೫% ಎಥಿಲೀನ್ ಡೈಬ್ರೋಮೈಡ್ ಇರುತ್ತದೆ. ಅನೇಕ ಸಾವಯುವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಎಥಿಲೇನ್ ಡೈಬ್ರೋಮೈಡ್ ಬಳಕೆಯಾಗುತ್ತದೆ. ಆಹಾರ ಧಾನ್ಯಗಳ ಶೇಖರಣೆಯಲ್ಲಿ ಇದರ ಉಪಯೋಗವಿದೆ-ಧಾನ್ಯಗಳಿಗೆ ತಗಲುವ ಕೀಟಗಳ ನಿವಾರಣೆಗೆ ಧಾನ್ಯಗಳನ್ನೂ ಅವುಗಳನ್ನು ಶೇಖರಿಸಿಡುವ ಸ್ಥಳ, ಮೊದಲಾದವನ್ನೂ ಎಥಿಲೀನ್ ಡೈಬ್ರೋಮೈಡ್ ಆವಿಯಿಂದ ಸಂಸ್ಕರಿಸುತ್ತಾರೆ. == ಉಲ್ಲೇಖಗಳು ==